ನವದೆಹಲಿ, ಜ 14 (DaijiworldNews/PY): ಪೂರ್ವ ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದವಾಗಿ ಬಿಟ್ಟು ಹೋಗಿರುವ ಚೀಲವೊಂದು ಪತ್ತೆಯಾಗಿದ್ದು, ಇದರಲ್ಲಿ ಬಾಂಬ್ ಇರುವುದು ಪತ್ತೆಯಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅಗ್ನಿಶಾಮಕ ದಳಗಳು ಹಾಗೂ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಜೊತೆಗೆ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಬಾಂಬ್ ನಿಷ್ಕ್ರಿಯ ದಳ ಯಶಸ್ವಿಯಾಗಿದೆ.
ದೆಹಲಿ ಪೊಲೀಸ್ ವಿಶೇಷ ದಳವೂ ಸ್ಥಳಕ್ಕೆ ಧಾವಿಸಿದೆ. ಘಾಜಿಪುರ ಮಂಡಿಯಲ್ಲಿ ಪತ್ತೆಯಾದ ಸುಧಾರಿತ ಸ್ಪೋಟಕ ಸಾಧನ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಖಚಿತಪಡಿಸಿದ್ದಾರೆ.