ಭುವನೇಶ್ವರ, ಜ 14 (DaijiworldNews/PY): ಎನ್ಡಿಟಿವಿ ಪತ್ರಕರ್ತ ಕಮಲ್ ಖಾನ್ (61) ಉತ್ತರ ಪ್ರದೇಶದ ಲಕ್ನೊದಲ್ಲಿರುವ ಬಟ್ಲರ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಕಮಲ್ ಖಾನ್ ಅವರು ಎನ್ಡಿಟಿವಿಯಲ್ಲಿ ಕಾರ್ಯನಿರ್ವಾಹಕ ಸಂಪದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರು ರಾಮನಾಥ್ ಗೋಯೆಂಕಾ ಪ್ರಶಸ್ತಿ ಹಾಗೂ ಭಾರತದ ರಾಷ್ಟ್ರಪತಿಗಳಿಂದ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾಗಿದ್ದರು.
ಕಮಲ್ ಖಾನ್ ನಿಧನಕ್ಕೆ ದೇಶಾದ್ಯಂತ ಮಾಧ್ಯಮ ಸಹೋದ್ಯೋಗಿಗಳು ದುಃಖ ವ್ಯಕ್ತಪಡಿಸಿದ್ದಾರೆ.
ಇವರು ಪತ್ನಿ ರುಚಿ ಮತ್ತು ಅವರ ಮಗ ಅಮನ್ ಅವರನ್ನು ಅಗಲಿದ್ದಾರೆ.