ಬೆಂಗಳೂರು, ಜ 14 (DaijiworldNews/MS): "ಬೃಹನ್ನಾಟಕ ಸೃಷ್ಟಿಯೇ ಡಿ.ಕೆ.ಶಿವಕುಮಾರ್ ಅವರ ಉದ್ದೇಶವಾಗಿಬಿಟ್ಟಿದೆ" ಎಂದು ಬಿಜೆಪಿಯೂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿಕೆಶಿ ವಿರುದ್ದ ಕಿಡಿಕಾರಿದೆ.
ಪಾದಾಯಾತ್ರೆ ಮೊಟಕುಗೊಳಿಸಿದ್ದ ಡಿ.ಕೆ.ಶಿವಕುಮಾರ್ ರಾತ್ರಿ ತಮ್ಮ ಕನಕಪುರ ನಿವಾಸಕ್ಕೆ ಹಿಂದಿರುಗಿದ್ದಾರೆ. ತಡರಾತ್ರಿ 12.30ರ ಸಮಯದಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ವಿಶ್ವನಾಥ್, ಮುಂತಾದವರು ಡಿಕೆಶಿ ಅವರಿಗೆ ನೋಟಿಸ್ ನೀಡಲು ಮನೆಗೆ ತೆರಳಿದ್ದಾರೆ. ಈ ವೇಳೆ ನೋಟಿಸ್ ನೀಡಿರುವವರು ಯಾರೆಂದು ಪ್ರಶ್ನಿಸಿ ಡಿಕೆಶಿ ಯವರಿಗೆ ಅಧಿಕಾರಿಗಳು ಜಿಲ್ಲಾಧಿಕಾರಿಗಳೆಂದು ಉತ್ತರಿಸಿದ್ದಾರೆ. ಆಗ ಶಿವಕುಮಾರ್ ರವರು ಅಪರ ಜಿಲ್ಲಾಧಿಕಾರಿಗೆ ಕೋವಿಡ್ ತಗುಲಿದ್ದು ಅವರು ಸಹಿ ಮಾಡಿ ನೋಟಿಸ್ ನಾನು ಪಡೆಯುವುದಿಲ್ಲ . 48 ಗಂಟೆಗಳ ನಂತರ ಪಡೆಯುತ್ತೇನೆ ಎಂದಿದ್ದಾರೆ. ಆನಂತರ ಅಧಿಕಾರಿಗಳ ತಂಡ ನೋಟಿಸ್ ಅನ್ನು ಮನೆಯ ಗೇಟಿಗೆ ಅಂಟಿಸಿ ತೆರಳಿದರು. ಆದರೆ ಬೆಳಗ್ಗೆ ನೋಟಿಸ್ ಅಲ್ಲಿ ಇರಲಿಲ್ಲ . ಈ ವಿಚಾರವಾಗಿ ಟ್ವೀಟ್ ಮಾಡಿದ ಬಿಜೆಪಿ "ಬೃಹನ್ನಾಟಕ ಸೃಷ್ಟಿಯೇ ಅವರ ಉದ್ದೇಶವಾಗಿಬಿಟ್ಟಿದೆ. ಜಿಲ್ಲಾಧಿಕಾರಿಯ ನೋಟಿಸ್ ಜಾರಿ ಮಾಡಲು ಬಂದ ಅಧಿಕಾರಿಗಳ ಜತೆ ಹೈಡ್ರಾಮಾ ಸೃಷ್ಟಿಸಿದ್ದೀರಿ. ಪಾದಯಾತ್ರೆ ಮಾಡಿ ಕೊರೋನಾ ಹಂಚುವಾಗ ನೆನಪಾಗದ ಕೊರೋನಾ ಮಾರ್ಗಸೂಚಿ ಈಗ ನೆನಪಾಗುತ್ತಿದೆಯೇ? " ಎಂದು ಕಿಡಿಕಾರಿದೆ.
"ನಿಮ್ಮ ಆರೋಗ್ಯದ ಜತೆಗೆ ಸಾರ್ವಜನಿಕರ ಆರೋಗ್ಯವೂ ಅತಿ ಮುಖ್ಯ.ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿರುವ ನೀವು ಕುಟುಂಬ ವರ್ಗದ ಜತೆ ಬೆರೆಯುವ ಮುನ್ನ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.ಬನ್ನಿ ಕನಕಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಪರೀಕ್ಷೆ ಮಾಡಿಸುತ್ತೇವೆ, ತಯಾರಿದ್ದೀರಾ?ಮನೆ ಬಾಗಿಲಿಗೆ ಅಂಟಿಸಿದ ನೋಟಿಸ್ ನೀವೇ ಕಿತ್ತೆಸೆದಿರಾ?" ಎಂದು ಪ್ರಶ್ನಿಸಿದೆ.