ನವದೆಹಲಿ, ಜ 14 (DaijiworldNews/AN): ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,64,202 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, 1,09,345 ಚೇತರಿಕೆಯನ್ನು ಕಂಡಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073ಗಳಷ್ಟು ಕಂಡಿದ್ದು, ನಿನ್ನೆಗಿಂತ ಇಂದು ಶೇ. 6.7ರಷ್ಟು ಪಾಸಿಟಿವಿಟಿ ದರ ಏರಿಕೆ ಕಂಡಿದೆ.
ದೇಶದಲ್ಲಿ 5,753 ಒಮಿಕ್ರಾನ್ ಪ್ರಕರಣ ದೃಢಪಡಿದ್ದು, ನಿನ್ನೆ 315 ಮಂದಿ ಈ ವೈರಸ್ನಿಂದಾಗಿ ಮೃತ ಪಟ್ಟಿದ್ದಾರೆ.
ಕೊರೊನಾ ಪ್ರಕರಣಗಳ ಸಂಖ್ಯೆ 1,54,542 ರಿಂದ 12,72,073 ಕ್ಕೆ ಏರಿಕೆಯಾಗಿದೆ ಮತ್ತು ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇಕಡಾ 14.78 ರಷ್ಟಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ನಿನ್ನೆ (ಜ.13) ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅನುಸರಿಸಿದ ನಿಯಮಗಳ ಬಗ್ಗೆ ಪರಿಶೀಲಿಸಿ, ಕೊರೊನಾ ನಿಯಮಗಳನ್ನು ರೂಪಿಸುವಾಗ ಜನ ಸಾಮಾನ್ಯರ ಆರ್ಥಿಕತೆ ಮತ್ತು ಜೀವನೋಪಾಯವನ್ನು ರಕ್ಷಿಸುವ ಕುರಿತು ಮಾಹಿತಿ ನೀಡಿದರು. ಈ ವೈರಸ್ ಹಿಂದಿನ ವೈರಸ್ಗಿಂತಲೂ ಹಲವಾರು ಪಟ್ಟು ವೇಗವಾಗಿ ಸಾಮಾನ್ಯ ಜನರಿಗೆ ತಗಲುತ್ತದೆ ಎಂದಿದ್ದರು.