ಚಂಡೀಗಡ, ಜ 13 (DaijiworldNews/AN): ಮುಂಬರುವ ಪಂಜಾಬ್ ಚುನಾಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರ ಕೈಗೊಳ್ಳಲು ಜನರಿಗೇ ಅವಕಾಶ ನೀಡಲಾಗಿದ್ದು, ಆದರೆ, ತಮ್ಮ ಆಯ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಗವಂತ್ ಮಾನ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಘೋಷಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾನು ಪಂಜಾಬ್ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಯಾರು ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಬೇಕು ಎನ್ನುವುದನ್ನು ಜನರು ತಮ್ಮ ಧ್ವನಿ ರೆಕಾರ್ಡ್ ಅಥವಾ ವಾಟ್ಸಾಪ್ ಮೂಲಕ ಜ. 17 ರ ಸಂಜೆ 5 ಗಂಟೆಯೊಳಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಜೂನ್ನಲ್ಲಿ ಪಂಜಾಬ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡುದ್ದ ಕೇಜ್ರಿವಾಲ್, ಸಿಖ್ ಸಮುದಾಯದವರೊಬ್ಬರು ಸಿಎಂ ಅಭ್ಯರ್ಥಿಯಾಗಲಿದ್ದು, ಇಡೀ ಪಂಜಾಬ್ ಅವರ ಬಗ್ಗೆ ಹೆಮ್ಮೆ ಪಡಲಿದೆ ಎಂದಿದ್ದರು.
ನನ್ನ ಕಿರಿಯ ಸಹೋದರನಾದ ಭಗವಾನ್ ಮಾನ್ ಅನ್ನು ಪಂಜಾಬ್ ಜನರೂ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪಂಜಾಬ್ನಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ.