ಮೈಸೂರು, ಜ 13 (DaijiworldNews/PY): ಬಸ್ನಲ್ಲಿ ಮಹಿಳೆಯರಿಗೆ ಚುಡಾಯಿಸಿದ್ದಕ್ಕೆ & ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಂದನೆ ಮಾಡಿದ ವ್ಯಕ್ತಿಗೆ ಮಹಿಳೆಯೊಬ್ಬರು ಥಳಿಸಿದ ಘಟನೆ ನಗರದ ವಿವಿ ಮೊಹಲ್ಲಾದ ಸ್ಯಾನಿಟೋರಿಯಂ ಸಮೀಪ ನಡೆದಿದೆ.
ನಗರ ಬಸ್ ನಿಲ್ದಾಣದಿಂದ ಮೇಟಗಳ್ಳಿ ಕಡೆಗೆ ತೆರಳುವ ಮಾರ್ಗದ ಬಸ್ನಲ್ಲಿ ಮಹಿಳೆಯರನ್ನು ವ್ಯಕ್ತಿಯೋರ್ವ ಚುಡಾಯಿಸುತ್ತಿದ್ದ. ಇದನ್ನು ಮಹಿಳಾ ಪ್ರಯಾಣಿಕರು ಪ್ರಶ್ನಿಸಿದಾಗ ಕೊಕೆ ಬೆದರಿಕೆ ಹಾಕಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡ ಮಹಿಳೆಯರು ಆ ವ್ಯಕ್ತಿಯನ್ನು ಬಸ್ನಿಂದ ಹೊರದಬ್ಬಿ ಹಿಗ್ಗಾಮುಗ್ಗಾ ಥಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.