ತಮಿಳುನಾಡು, ಜ 12 (DaijiworldNews/AN): ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡಿನಲ್ಲಿ 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, "2014 ರಲ್ಲಿ ಭಾರತದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದು, ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆಯು 596 ವೈದ್ಯಕೀಯ ಕಾಲೇಜುಗಳಿಗೆ ಏರಿದೆ. 2014ರ ಮೊದಲು ದೇಶದಲ್ಲಿ ಕೇವಲ ಏಳು ಏಮ್ಸ್ʼಗಳಿದ್ದವು, ಆದರೆ ಈಗ ಅನುಮೋದಿಸಲಾದ ಏಮ್ಸ್ ಸಂಖ್ಯೆ 22ಕ್ಕೆ ಏರಿದೆ" ಎಂದರು.
ಇನ್ನು ಮುಂದಿನ ವರ್ಷಗಳಲ್ಲಿ ಭಾರತವು ಗುಣಮಟ್ಟದ ಮತ್ತು ಕೈಗೆಟುಕುವ ಆರೈಕೆಯ ಸ್ಥಾನವಾಗಲಿದ್ದು, ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿರಲು ಭಾರತಕ್ಕೆ ಅಗತ್ಯವಿರುವ ಎಲ್ಲವೂ ಇದೆ ಮತ್ತು ಟೆಲಿಮೆಡಿಸಿನ್ ಅನ್ನು ನೋಡುವಂತೆ ವೈದ್ಯಕೀಯ ಭ್ರಾತೃತ್ವವನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
ಸುಮಾರು 4,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ವೈದ್ಯಕೀಯ ಕಾಲೇಜುಗಳಲ್ಲಿ 1,450 ಸೀಟುಗಳ ಸಂಚಿತ ಸಾಮರ್ಥ್ಯವನ್ನು ಹೊಂದಿದ್ದು, ಮತ್ತೊಂದೆಡೆ ಸಿಐಸಿಟಿಯ ಹೊಸ ಕ್ಯಾಂಪಸ್, ವಿಶಾಲವಾದ ಗ್ರಂಥಾಲಯವನ್ನು ಹೊಂದಿದ್ದು, ಮೂರು ಮಹಡಿಗಳನ್ನು ಒಳಗೊಂಡಿದೆ.