ನವದೆಹಲಿ, ಜ 12 (DaijiworldNews/HR): ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೊರೆದು ಬಿಜೆಪಿಯಿಂದ ನಿರ್ಗಮಿಸಲು ಸಿದ್ಧರಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು 2014 ರಲ್ಲಿ ಅವರು ಮಾಡಿದ ದ್ವೇಷದ ಭಾಷಣದ ಮೇಲೆ ಇದೀಗ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೌರ್ಯ ಅವರನ್ನು ಕೇಳಲಾಗಿತ್ತು ಆದರೆ ಅವರು ಹಾಜರಾಗಲಿಲ್ಲ.
2014 ರಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಾಯಾವತಿಯವರ ಬಹುಜನ ಸಮಾಜ ಪಕ್ಷದಲ್ಲಿ (ಬಿಎಸ್ಪಿ) ಸಂಧರ್ಭದಲ್ಲಿ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಭಾಷನವನ್ನು ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 24 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಸುಲ್ತಾನ್ ಪುರದಲ್ಲಿ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ.
ಇನ್ನು ಮದುವೆಯ ಸಂದರ್ಭದಲ್ಲಿ ಗೌರಿ ಅಥವಾ ಗಣೇಶನನ್ನು ಪೂಜಿಸಬಾರದು. ಇದು ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದಾರಿತಪ್ಪಿಸಲು ಮತ್ತು ಗುಲಾಮರನ್ನಾಗಿ ಮಾಡಲು ಮೇಲ್ಜಾತಿ ಪ್ರಾಬಲ್ಯದ ಪಿತೂರಿಯಾಗಿದೆ ಎಂದು ಶ್ರೀ ಮೌರ್ಯ ಅವರು ಸಭೆಯೊಂದರಲ್ಲಿ ಹೇಳಿದ್ದರು.