ಪಶ್ಚಿಮ ಬಂಗಾಳ, ಜ 12 (DaijiworldNews/AN): ಪಬ್ಜಿ ಆಡುತ್ತಾ ಇಬ್ಬರು ಪ್ರೀತಿಯಲ್ಲಿ ಬಿದ್ದು ವಿವಾಹವಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಬ್ಜಿ ಆಡುತ್ತಿದ್ದ ಪಶ್ಚಿಮ ಬಂಗಾಳದ ಧುಪ್ಗುರಿ ನಿವಾಸಿ ಸೈನೂರ್ ಆಲಂಗೆ ಕರ್ನಾಟಕದ ಫ್ರಿಜಾ ಎಂಬ ಯುವತಿಯ ಪರಿಚಯವಾಗಿದೆ. ಹೀಗೆ ಪಬ್ಜಿ ಆಡುತ್ತಾ ಇಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಂಡು ಬಳಿಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಇಬ್ಬರು ಫೋನ್ ಮೂಲಕವೇ ಮಾತನಾಡುತ್ತಿದ್ದರು. ಆದರೆ, ಮುಖಾಮುಖಿ ಭೇಟಿಯಾಗಿರಲಿಲ್ಲ.
ಫ್ರಿಜಾ ಬೆಂಗಳೂರಿನಿಂದ ಬಾಗ್ದೋಗ್ರಾ ಮಾರ್ಗವಾಗಿ ವಿಮಾನದಲ್ಲಿ ಧುಪ್ಗುರಿಗೆ ಬಂದಿದ್ದು, ಸೈನೂರು ಮನೆ ಮುಂದೆ ಬಂದು ಕಾಲಿಂಗ್ ಬೆಲ್ ಮಾಡಿದ್ದಾಳೆ. ಈ ವೇಳೆ ಬಾಗಿಲು ತೆರೆದ ನನಗೆ ಆಶ್ಚರ್ಯ ಕಾದಿದ್ದು, ನೋಡಿದರೆ ಫ್ರಿಜಾ ನನ್ನ ಮುಂದೆ ನಿಂತಿದ್ದಳು ಎಂದು ಸೈನೂರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸೈನೂರ್ ತಂದೆ, ನಾಲ್ಕು ವರ್ಷಗಳ ಸಂಬಂಧ ಪಬ್ಜಿಯಿಂದ ಒಂದಾಗಿದೆ. ಇದರಿಂದ ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದಿದ್ದಾರೆ.
ಫ್ರಿಜಾ ತನ್ನ ಪ್ರೀತಿಯ ಕಾರಣದಿಂದ 2,554 ಕಿಲೋಮೀಟರ್ ಕ್ರಮಿಸಿ ಇಲ್ಲಿಗೆ ಬರುತ್ತಾಳೆ ಎಂದು ನಾವು ಭಾವಿಸಿರಲಿಲ್ಲ. ಫ್ರಿಜಾ ತನ್ನ ಪ್ರೀತಿಯ ಬಗ್ಗೆ ತಿಳಿಸಿದ್ದು, ಬಳಿಕ ಇಬ್ಬರು ವಿವಾಹವಾಗಿದ್ದಾರೆ. ಪಬ್ಜಿಯಿಂದ ಗ್ರಾಮಕ್ಕೆ ಹೊಸ ಸೊಸೆ ಸಿಕ್ಕಿದ್ದಾಳೆ ಎಂದು ಸ್ಥಳೀಯರಾದ ಮಕ್ಬೂಲ್ ಹೊಸೈನ್ ಮತ್ತು ಫಿರೋಜ್ ಹೊಸೈನ್ ಸಂತಸ ವ್ಯಕ್ತಪಡಿಸಿದ್ದಾರೆ.