ನವದೆಹಲಿ, ಜ.12 (DaijiworldNews/PY): ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್ಸ್ಗಳು ಹ್ಯಾಕ್ ಮಾಡಲಾಗಿದ್ದು, ಖಾತೆಯನ್ನು ಪುನಃಸ್ಥಾಪಿಸಲಾಗಿದೆ.
ಈ ಕುರಿತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಮಾಹಿತಿ ನೀಡಿದ್ದು, "ಅಧಿಕೃತ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಟ್ವಿಟರ್ ಖಾತೆಯನ್ನು ಎಲೋನ್ ಮಸ್ಕ್ ಎಂದು ಹ್ಯಾಕರ್ಸ್ಗಳು ಹ್ಯಾಕ್ ಮಾಡಿದ್ದರು. ಇದೀಗ ಖಾತೆಯನ್ನು ಪುನಃಸ್ಥಾಪಿಸಲಾಗಿದೆ" ಎಂದು ಟ್ವೀಟ್ ಮೂಲಕ ತಿಳಿಸಿದೆ.
ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆಯ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ್ದು, ಗ್ರೇಟ್ ಜಾಬ್ ಎಂದು ಹ್ಯಾಕರ್ಸ್ಗಳು ಟ್ವೀಟ್ ಮಾಡಿದ್ದರು. ಅಲ್ಲದೇ, ಒಂದಿಷ್ಟು ಲಿಂಕ್ಗಳನ್ನು ಪೋಸ್ಟ್ ಮಾಡಿದ್ದರು. ಕೆಲ ಹೊತ್ತಿನ ಬಳಿಕ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದ್ದು, ಹ್ಯಾಕರ್ಸ್ಗಳ ಕೈಯಿಂದ ಖಾತೆಯನ್ನು ವಾಪಾಸ್ಸು ಪಡೆದು ಪ್ರೊಫೈಲ್ ಅನ್ನು ಬದಲಿಸಿದೆ.