ದೆಹಲಿ, ಜ 11 (DaijiworldNews/HR): ದೆಹಲಿಯಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಖಾಸಗಿ ಕಂಪನಿಗಳು ವರ್ಕ್ ಫ್ರಂ ಹೋಂಗೆ ಸೂಚಿಸುವಂತೆ ತಿಳಿಸಿದೆ.
ಈ ಕುರಿತು ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಯಾವುದೇ ಲಾಕ್ಡೌನ್ ಇರುವುದಿಲ್ಲ, ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ನಿಬಂಧನೆ ವಿಧಿಸುವುದು ಅನಿವಾರ್ಯವಾಗಿದ್ದು, ಎಲ್ಲಾ ಖಾಸಗಿ ಕಚೇರಿಗಳನ್ನು ಮುಚ್ಚಲು ಮತ್ತು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಕಳುಹಿಸಲು ಆದೇಶಿಸಲಾಗಿದೆ" ಎಂದರು.
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ, ಗರಿಷ್ಠ ಮಟ್ಟ ತಲುಪಿದ ನಂತರ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತವೆ. ಕೊರೊನಾ ಸಂಖ್ಯೆ ಈ ವಾರ ಖಂಡಿತವಾಗಿ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಇದ್ದು, ಇದಾದ ಬಳಿಕ ಸೋಂಕಿನ ಸಂಖ್ಯೆ ಇಳಿಕೆ ಆಗಿದೆ.
ಇನ್ನು ಕೊರೊನಾ ಪ್ರಕರಣಗಳು ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಹೆಚ್ಚುತ್ತಿದ್ದು, ಮೊದಲು ಸೋಂಕು ಹರಡುವ ಪ್ರಮಾಣವು ನಿಧಾನಗೊಂಡಿದೆ ಎಂಬುದು ಗಮನಿಸಬೇಕಾದ ಅಂಶ. ಈ ಪ್ರವೃತ್ತಿ ಮುಂದುವರಿಯುತ್ತದೆ ಮತ್ತು ಶೀಘ್ರದಲ್ಲೇ ಕೊರೊನಾ ಪಾಸಿಟಿವಿಟಿ ದರವು ಮತ್ತಷ್ಟು ಕುಸಿಯುತ್ತದೆ ಎಂದಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಗರದ ರೆಸ್ಟೋರೆಂಟ್ಗಳಲ್ಲಿ ಡೈನ್-ಇನ್ ಸೌಲಭ್ಯವನ್ನು ಸ್ಥಗಿತಗೊಳಿಸಿದೆ.