ಉತ್ತರಪ್ರದೇಶ, ಜ 11 (DaijiworldNews/HR): ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ಯೋಗಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಸ್ವಾಮಿ ಪ್ರಸಾದ್, ಸಮಾಜವಾದಿ ಪಕ್ಷ ಸೇರಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಅವ್ರು ಕೆಲವು ಬೆಂಬಲಿತ ಶಾಸಕರಿದ್ದು, ಅವರು ಕೂಡ ಬಿಜೆಪಿ ತೊರೆದು ಎಸ್ ಪಿ ಸೇರಬಹುದು ಎನ್ನಲಾಗಿದೆ.
ಇನ್ನು ಸ್ವಾಮಿ ಅವರು ಟಿಕೆಟ್ ಹಂಚಿಕೆ ಕುರಿತು ಅಸಮಾಧಾನ ಹೊರ ಹಾಕಿದ್ದು, ಈ ಕಾರಣದಿಂದ್ಲೇ ಸಧ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆಯನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಕಳುಹಿಸಿದ್ದು, ಇದರೊಂದಿಗೆ ಸ್ವಾಮಿ ಪ್ರಸಾದ್ ಮೋರಿಯಾ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ (ಎಸ್ಪಿ) ಸೇರಿದ್ದಾರೆ.