ಕಲಬುರ್ಗಿ, ಜ 11 (DaijiworldNews/MS): ಅರಾಫತ್ ಕಾಲೋನಿಯ 13 ವರ್ಷದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ನಾಲ್ಕೈದು ಮಂದಿ ಬಾಲಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ನಗರದ ಸುನ್ನದ ಭಟ್ಟಿ ಪ್ರದೇಶದಲ್ಲಿ ವರದಿಯಾಗಿದೆ.
ಘಟನೆ ಜನವರಿ 5ರಂದು ನಡೆದಿದ್ದು, ಜನವರಿ 10 ರಂದು ಸೋಮವಾರ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ
ಬಾಲಕಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರಿಂದ ಘಟನೆ ತಡವಾಗಿ ತಿಳಿದು ಬಂದಿದೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಚ್ಚರಿಯೆಂದರೆ, ಎಲ್ಲಾ ಅತ್ಯಾಚಾರಿಗಳು 15 ರಿಂದ 1 6 ವರ್ಷ ವಯಸ್ಸಿನವರು ಎಂದು ಪೊಲೀಸರು ಹೇಳಿದ್ದಾರೆ.
ಸುನ್ನದ ಭಟ್ಟಿ ಪ್ರದೇಶದ ಇನಾಮದಾರ್ ಕಾಲೇಜು ಹಿಂಭಾಗದ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಕೃತ್ಯ ಎಸಗಿದ ಬಾಲಕರೆಲ್ಲರೂ ಬಾಲಕಿಯ ಪಾಲಕರಿಗೆ ಪರಿಚಯಸ್ಥರು. ಹೀಗಾಗಿ, ಅವರನ್ನು ಸುಲಭವಾಗಿ ಪತ್ತೆ ಮಾಡಲಾಗಿದ್ದು, ಮಂಗಳವಾರ (ಜ. 11) ವಶಕ್ಕೆ ಪಡೆಯಲಾಗುವುದು" ಎಂದು ಸಿಪಿಐ ಶಿವಾನಂದ ಗಾಣಿಗೇರ ತಿಳಿಸಿದ್ದಾರೆ.