ಬೆಂಗಳೂರು, ಜ 11 (DaijiworldNews/HR): ಡಿ.ಕೆ. ಶಿವಕುಮಾರ್ ಅವರು ಸೀಸನ್ ರಾಜಕಾರಣಿ, ಏನಾದ್ರೂ ಹೇಳಿದ್ರೆ ಅದಕ್ಕೊಂದು ಏನಾದ್ರೂ ಹೇಳುತ್ತಾರೆ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಒಂಥಾರ ಸೀಸನ್ ರಾಜಕಾರಣಿ, ಏನಾದ್ರೂ ಹೇಳಿದ್ರೆ ಅದಕ್ಕೊಂದು ಏನಾದ್ರೂ ಹೇಳುತ್ತಾರೆ. ಅನುಭವವನ್ನು ರಾಜಕೀಯಕ್ಕೆ ಬಳಸಬೇಕು. ಅದರ ಬದಲು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಲಾಕ್ ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಲಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ" ಎಂದು ಹೇಳಿದ್ದಾರೆ.