ಎಚ್ ಡಿ ಕೋಟೆ, ಜ,10 (DaijiworldNews/AN): ಹೆತ್ತ ತಾಯಿಯೇ ಮಗುವನ್ನು ಮಚ್ಚಿನಿಂದ ಭೀಕರವಾಗಿ ಕೊಂದು ಪರಾರಿಯಾಗಿರುವ ಘಟನೆ ಎಚ್ ಡಿ ಕೋಟೆಯ ಬೂದನೂರು ಗ್ರಾಮದಲ್ಲಿ ನಡೆದಿದೆ.
ಘಟನೆ ವೇಳೆ ತೀವ್ರ ರಕ್ತಸ್ರಾವಗೊಂಡು ಅಸ್ವಸ್ಥಗೊಂಡ ಬಾಲಕನನ್ನು ಬೂದನೂರು ಗ್ರಾಮದ ಶಂಕರ್ ಭವಾನಿಯ ದಂಪತಿಯ ಏಕೈಕ ಪುತ್ರ 4 ವರ್ಷದ ಶ್ರೀನಿವಾಸ ಎಂದು ಗುರುತಿಸಿದ್ದು, ಬಾಲಕನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಈತ ಕೊನೆಯುಸಿರೆಳೆದಿದ್ದಾನೆ.
ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಶಂಕರ್ ಮನೆಯಲ್ಲೇ ವಾಸವಾಗಿದ್ದರು, ಮದ್ಯಾಹ್ನ ಪೇಟೆಗೆ ಹೋಗಿ ಬರುವ ಸಂದರ್ಭದಲ್ಲಿ ಭವಾನಿ ಮಗುವಿನ ತಲೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಬಾಲಕನ ತಲೆಯ ಮೇಲೆ ಹಲವಾರು ಮಚ್ಚಿನ ಏಟುಗಳು ಬಿದ್ದಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿತ್ತು.
ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಖಾಸಗೀ ಆಸ್ಪತ್ರಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು.