ಬೆಂಗಳೂರು, ಜ.10 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಅವರ ಬಳಿಗೆ ಕಳುಹಿಸಿದ್ದಾರೆ" ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ ಕೆ ಶಿವಕುಮಾರ್ ಅವರಿಗೆ ಕೊರೊನಾ ಸೋಂಕು ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಅವರ ಬಳಿ ಕಳುಹಿಸಲಾಗಿದೆ. ಸೋಂಕಿತ ವ್ಯಕ್ತಿಯನ್ನು ಬೇಕೆಂದೇ ಅವರು ಬಳಿಕ ಕಳುಹಿಸಿದ್ಧಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಡಿಸಿ ಜವರೇಗೌಡ ಅವರು, ಮೇಕೆದಾಟು ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಲು ಬಂದಿದ್ದರು. ಕೊರೊನಾ ನಿಯಮ ಪಾಲಿಸಿ ಎಂದಿದ್ದರು. ನಂತರ ಸಂಜೆ ಶಿಕೆಶಿ ಬಳಿ ಬಂದಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂಇದದ್ರು, ಈ ವೇಳೆ ಅವರಿಗೆ ಡಿಕೆಶಿ ಬೈದಿದ್ದರು.
ಪಾದಯಾತ್ರೆ ನಡೆಯುತ್ತಿದ್ದ ಸ್ಥಳಕ್ಕೆ ಹೋದ ಕಾರಣ ಎಡಿಸಿ ಇಂದು ಬೆಳಗ್ಗೆ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.