ಶ್ರೀನಗರ, ಜ 10 (DaijiworldNews/HR): ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹುಸೇನ್ಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿರುವ ಘಟನೆ ನಡೆದಿದೆ.
ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಇಬ್ಬರು ಸ್ಥಳೀಯ ಉಗ್ರಗಾಮಿಗಳು ಅಲ್-ಬದ್ರ್ ಅಲ್-ಬದ್ರ್ಗೆ ಸಂಬಂಧಿಸಿದ್ದರು ಮತ್ತು ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ ಎಂದು ತಿಳಿಸಿದರು.
ಇನ್ನು ಈ ವರ್ಷದ ಮೊದಲ ಒಂಬತ್ತು ದಿನಗಳಲ್ಲಿ ಏಳು ಎನ್ಕೌಂಟರ್ಗಳಲ್ಲಿ 13 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಭಾನುವಾರ ಸಂಜೆ ಸೇನೆಯ 1 ರಾಷ್ಟ್ರೀಯ ರೈಫಲ್ ವಿಭಾಗ ಮತ್ತುಸಿಆರ್ಪಿಎಫ್ನ ಜಂಟಿ ತಂಡವು ಆ ಪ್ರದೇಶದಲ್ಲಿ ಜಮ್ಮು ಕಾಶ್ಮೀರ ಪೋಲೀಸ್ರಿಗೆ ಮಾಹಿತಿಯ ಆಧಾರದ ಮೇಲೆ ಕಾರ್ಡನ್-ಅಂಡ್-ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ತಿಳಿಸಿದ್ದಾರೆ.