ನವದೆಹಲಿ, ಜ.09 (DaijiworldNews/PY): ಸಂಸತ್ನ ಸುಮಾರು 400 ಕ್ಕೂ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.
ಜ.4ರಿಂದ 8ರವರೆಗೆ ಸಂಸತ್ತಿನ 1,409 ಸಿಬ್ಬಂದಿಗಳಲ್ಲಿ 402 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಬಳಿಕ ಅವರ ಮಾದರಿಗಳನ್ನು ಒಮ್ರಿಕಾನ್ ಪತ್ತೆಗಾಗಿ ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿದೆ.
"ಜ.4ರಿಂದ 8ರವರೆಗೆ 402 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಮ್ರಿಕಾನ್ ದೃಢೀಕರಣಕ್ಕಾಗಿ ಎಲ್ಲಾ ಮಾದರಿಗಳನ್ನು ಜೀನೀಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ತಮ್ಮ ಸೋಂಕಿತ ಉದ್ಯೋಗಿಗಳ ಜೊತೆ ಸಂಪರ್ಕಕ್ಕೆ ಬಂದ ಬಳಿಕ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ವಿವಿಧ ಅಧಿಕಾರಿಗಳು ಸಹ ಐಸೋಲೇಶನ್ಗೆ ಒಳಗಾಗಿದ್ಧಾರೆ.