ಬೆಂಗಳೂರು, ಜ 09 (DaijiworldNews/HR): ಸಚಿವ ಎಸ್ ಟಿ ಸೋಮಶೇಖರ್ ಅವರ ಪುತ್ರನಿಗೆ ವೀಡಿಯೋ ಕಳಿಸಿ, ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಸೋಮಶೇಖರ್ ಅವರ ಪುತ್ರ ನಿಶಾಂತ್ಗೆ ಎಡಿಟ್ ಮಾಡಿರುವ ವೀಡಿಯೋವನ್ನು ಕಳುಹಿಸಿದ್ದು, ಜೊತೆಗೆ ವಾಟ್ಸಾಪ್ ಮೂಲಕ ಸಚಿವ ಸೋಮಶೇಖರ್, ಅವರ ಪಿಎಗೆ ಕೂಡ ಕಳುಹಿಸಿ 1 ಕೋಟಿ ಹಣ ನೀಡದೇ ಇದ್ದರೇ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ರಿಲೀಸ್ ಮಾಡೋದಾಗಿಯೂ ಬೆದರಿಕೆ ಹಾಕಿ, ಬ್ಲಾಕ್ ಮೇಲ್ ಮಾಡಿದ್ದರು.
ಇನ್ನು ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು.
ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರು ದುಬೈನಿಂದ ಆಗಮಿಸಿದಂತ ಬೆಂಗಳೂರಿನ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ, ಆರೋಪಿ ರಾಹುಲ್ ಭಟ್ ಎಂಬಾತನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.