ನವದೆಹಲಿ, ಜ 09 (DaijiworldNews/HR): ಡಿಸೆಂಬರ್ 26 ರಂದು ವೀರ ಬಾಲ್ ದಿನ ಎಂದು ಆಚರಿಸಲಾಗುದು, ಇದು ಸಾಹಿಬ್ ಜಾಡೆಗಳ ಧೈರ್ಯ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆಗೆ ಸೂಕ್ತ ಗೌರವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ಮೋದಿ, "ಇಂದು ಗುರು ಗೋವಿಂದಸಿಂಗ್ ಜೀ ಅವರ ಪ್ರಕಾಶ್ ಪುರಬ್ ನ ಶುಭ ಸಂದರ್ಭದಲ್ಲಿ, ಈ ವರ್ಷ ಡಿಸೆಂಬರ್ 26 ರಿಂದ 'ವೀರ್ ಬಾಲ್ ದಿವಸ್' ಎಂದು ಆಚರಿಸಲಾಗುವುದು. ಸಾಹಿಬ್ ಜಾಡೆಗಳ ಧೈರ್ಯ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆಗೆ ಇದು ಸೂಕ್ತ ಗೌರವವಾಗಿದೆ" ಎಂದರು.
ಇನ್ನು "ವೀರ್ ಬಾಲ್ ದಿವಸ್ ಅದೇ ದಿನ ಸಾಹಿಬ್ಜಾದಾ ಝೋರಾವರ್ ಸಿಂಗ್ ಜೀ ಮತ್ತು ಸಾಹಿಬ್ಜಾದಾ ಫತೇ ಸಿಂಗ್ ಜೀ ಅವರು ಗೋಡೆಯಲ್ಲಿ ಜೀವಂತವಾಗಿ ಮುಚ್ಚಿದ ನಂತರ ಹುತಾತ್ಮರಾಗಿದ್ದು, ಈ ಇಬ್ಬರು ಮಹಾಜನರು ಧರ್ಮದ ಉದಾತ್ತ ತತ್ವಗಳಿಂದ ವಿಮುಖರಾಗುವುದರ ಬದಲು ಸಾವಿಗೆ ಆದ್ಯತೆ ನೀಡಿದವರು" ಎಂದಿದ್ದಾರೆ.