ಬೆಂಗಳೂರು, ಜ.09 (DaijiworldNews/PY): ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಇಂದು ಪಾದಯಾತ್ರೆ ಹಮ್ಮಿಕೊಳ್ಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಬೆಳ್ಳಂಬೆಳಗ್ಗೆಯೇ ಕಾವೇರಿ ನದಿಗೆ ತೆಪ್ಪದ ಮೂಲಕ ಸಾಗಿ ಪೂಜೆ ಸಲ್ಲಿಸಿದ್ದರು.
ಈ ಸಂದರ್ಭ ತೆಪ್ಪದಿಂದ ಇಳಿಯುವ ವೇಳೆ ಜಾರಿದ ಡಿ ಕೆ ಶಿವಕುಮಾರ್ ಮೈ ವಾಲಿತ್ತು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಅದನ್ನು ಬಿಜೆಪಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದೆ.
ಟ್ವೀಟ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಡಿ ಕೆ ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ" ಎಂದು ಲೇವಡಿ ಮಾಡಿದೆ.
"ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸುಳ್ಳಿನ ಜಾತ್ರೆ" ಎಂದು ಟೀಕಿಸಿದೆ.