ಮಧ್ಯಪ್ರದೇಶ ಜ, 09 (DaijiworldNews/AN): ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೋಲಾಹಲವನ್ನು ಸೃಷ್ಟಿಸಿದ್ದ ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಕರ್ತ ಓಮ್ಕಾರೇಶ್ವರ್ ಠಾಕೂರ್(25) ರವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅವರು ಗಿಟ್ಹಬ್ ನಲ್ಲಿ ಕೋಡ್ನ್ನು ರಚಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲಿಕೇಶನ್ನ್ನು ಹಂಚಿಕೊಂಡಿದ್ದು, ಇತರ ಸದಸ್ಯರನ್ನು ಗುಂಪಿಗೆ ಆಹ್ವಾನಿಸಿ, ಇದರಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ಲೋಡ್ ಮಾಡಿ ಮಹಿಳೆಯರನ್ನು ನಿಂದಿಸಿದ್ದಾರೆ ಮತ್ತು ಟ್ರೋಲ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕಳೆದ ಬಾರಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಒಪ್ಪಿಗೆಯಿಲ್ಲದೆ ಅವರ ಚಿತ್ರಗಳನ್ನು ಅಪ್ಲೋಡ್ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿಸಿದ್ದ ಬುಲ್ಲಿ ಬಾಯಿ ಆಪ್ ನಂತೆಯೇ 'ಸುಲ್ಲಿ ಡೀಲ್ಸ್' ಆ್ಯಪ್ ಈಗ ಮತ್ತೆ ಸುದ್ದಿಯಲ್ಲಿದೆ.
ಸುಲ್ಲಿ ಡೀಲ್ಸ್ ಆ್ಯಪ್ಗೆ ಸಂಬಂಧಿಸಿದ ಕೋಡ್ಗಳು ಹಾಗೂ ಚಿತ್ರಗಳನ್ನು ಕಂಡುಹಿಡಿಯಲು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.