ನವದೆಹಲಿ, ಜ 08 (DaijiworldNews/PY): "ಮಕ್ಕಳಿಗಾಗಿ ಆರಂಭಿಸಿದ ಕೊರೊನಾ ಲಸಿಕಾ ಅಭಿಯಾನದ ಒಂದು ವಾರದೊಳಗೆ 15-18 ವಯಸ್ಸಿನ 2 ಕೋಟಿ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ಧಾರೆ" ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ಧಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನ್ನ ಯುವ ಸ್ನೇಹಿತರೇ ಇದು ಒಳ್ಳೆಯ ಬೆಳವಣಿಗೆ. 15-18 ವರ್ಷದೊಳಗಿನ 2 ಕೋಟಿಗೂ ಅಧಿಕ ಮಕ್ಕಳು ತಮ್ಮ ಮೊದಲ ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಪ್ರಾರಂಭಗೊಂಡ ಒಂದು ವಾರದೊಳಗೆ ಇದು ಸಾಧ್ಯವಾಗಿದೆ" ಎಂದಿದ್ದಾರೆ.
ಬೆಳಗ್ಗೆ 7 ಗಂಟೆವರೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 90,59,360 ಮಂದಿಗೆ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ದೇಶದಲ್ಲಿ ಒಟ್ಟು 150.61 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ.