ಶಿವಮೊಗ್ಗ, ಜ 08 (DaijiworldNews/PY): "ಇಬ್ಬರೇ ಏಕೆ ಹೋಗಿ ಸಾಯುತ್ತೀರಿ? ವಿಪಕ್ಷ ನಾಯಕ ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ್ ಅವರಿಗೆ ಪ್ರಾರ್ಥನೆ ಮಾಡುತ್ತೇನೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾದಯಾತ್ರೆಗೆ ನೀವು ಇಬ್ಬರೇ ಹೋಗುತ್ತೀರಿ ಎನ್ನುತ್ತಿದ್ದೀರಿ. ಆದರೆ, ನಿಮ್ಮ ಕಾರ್ಯಕರ್ತರು ಬಿಡಿವುದಿಲ್ಲ. ನಾಳೆ ತಾ.ಪಂ, ಜಿ.ಪಂ ಅಸೆಂಬ್ಲಿ ಚುನಾವಣೆಯ ಇದೆ. ಇವರೆದುರು ಶೋ ಮಾಡಬೇಕು ಎಂದು ತುಂಬಾ ಜನರು ಬರುತ್ತಾರೆ. ನೀವು ಏಕೆ ಸುಮ್ಮನೆ ಸಾಯುತ್ತಿದ್ದೀರಿ, ಏಕೆ ಅವರನ್ನು ಸಾಯಿಸುತ್ತೀರಾ?" ಎಂದು ಕೇಳಿದ್ದಾರೆ.
"ರಾಜಕಾರಣ ಮಾಡಲೇಬೇಕೆಂದು ಹಠ ಹಿಡಿದರೆ ನನ್ನ ಅಭ್ಯಂತರವೇನಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ಕಾಂಗ್ರೆಸ್ ಇದನ್ನು ರಾಜಕಾರಣಕೋಸ್ಕರ ಬಳಸಿಕೊಳ್ಳಲಿದೆ ಎಂದು ರಾಜ್ಯದ ಮಂದಿ ಯೋಚನೆ ಮಾಡಿದ್ದಾರೆ" ಎಂದಿದ್ದಾರೆ.
"ಅಧಿಕಾರದಲ್ಲಿದ್ದ ವೇಳೆ ಏಕೆ ಕೃಷ್ಣ, ಕಾವೇರಿ, ಮೇಕೆದಾಟು ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ದಿರಿ. ರಾಜ್ಯದಲ್ಲಿ ಆಡಳಿತ ನಡೆಸಿದವರು ನೀವೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ನಿಮಗೆ ಕೃಷ್ಣ, ಕಾವೇರಿ, ಮೇಕೆದಾಟು ನೆನಪಾಗಿವೆ. ನಿಮ್ಮ ಹೋರಾಟಕ್ಕೆ ನನ್ನ ಅಭ್ಯಂತರ ಇಲ್ಲ" ಎಂದು ಹೇಳಿದ್ದಾರೆ.