ತೆಲಂಗಾಣ, ಜ 08 (DaijiworldNews/PY): ತೆಲಂಗಾಣ ರಾಷ್ಟ್ರ ಸಮಿತಿ ವೆಂಕಟೇಶ್ವರ ರಾವ್ ಪುತ್ರ ರಾಘವೇಂದ್ರ ರಾವ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮಕೃಷ್ಣನ್ ಎಂಬಾತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮೊದಲು ವಿಡಿಯೋದಲ್ಲಿ ತನ್ನ ಸಾವಿಗೆ ಶಾಸಕರ ಪುತ್ರ ಕಾರಣ ಎಂದು ಆರೋಪಿಸಿದ್ದಾರೆ. ಹಣಕಾಸಿನ ವಿವಾದ ಬಗೆಹರಿಸಲುವ ಸಲುವಾಗಿ ತನ್ನ ಪತ್ನಿಯನ್ನು ಹೈದರಾಬಾದ್ಗೆ ಕಳುಹಿಸಿ ಎಂದು ರಾಘವೇಂದ್ರ ಒತ್ತಾಯಿಸಿದ್ದರು ಎಂದು ರಾಮಕೃಷ್ಣನ್ ದೂರಿದ್ದಾರೆ.
ಘಟನೆಯ ಸಂಬಂಧ ರಾಘವೆಂದ್ರ ಬಂಧನಕ್ಕೆ ಒತ್ತಾಯಿಸಿ ಟ್ವೀಟ್ ಮಾಡಿರುವ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ರೇವಂತ್ ರೆಡ್ಡಿ, "ತನ್ನ ಬಳಿಗೆ ರಾಮಕೃಷ್ಣನ್ ಪತ್ನಿಯನ್ನು ಕಳುಹಿಸಿ ಎಂದು ರಾಘವೇಂದ್ರ ಪೀಡಿಸುತ್ತಿದ್ದ. ಕುಟುಂಬದೊಂದಿದೆ ರಾಮಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ವಿಡಿಯೋ ನೋಡಿದರೆ ಅವರ ದೌರ್ಜನ್ಯ ಎಂತದ್ದು ಎಂದು ತಿಳಿಯುತ್ತದೆ. ಇವರನ್ನು ತಕ್ಷಣವೇ ಬಂಧಿಸಿ ಹಾಗೂ ಪಕ್ಷದಿಂದ ಅಮಾನತುಗೊಳಿಸಿ" ಎಂದು ಆಗ್ರಹಿಸಿದ್ದಾರೆ.
"ಆರೋಪಿ ರಾಘವೇಂದ್ರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.