ಬೆಂಗಳೂರು, ಜ 08 (DaijiworldNews/PY): ಮಾನಹಾನಿಕರ ಸುದ್ದಿಯೊಂದನ್ನು ಬಿತ್ತರಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ 20 ಲಕ್ಷ ರೂ. ಪಡೆದಿದ್ದ ಬಿಟಿವಿ ಸುದ್ದಿ ವಾಹಿನಿಯ ಸಿಬ್ಬಂದಿಯೊರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿ ವಾಸವಿರುವ ಅನಿಲ್ಕುಮಾರ್ ಎನ್ನುವವರು ನೀಡಿರುವ ದೂರಿನ ಮೇರೆಗೆ ಮುಖ್ಯ ಆರೋಪಿ ತೀರ್ಥಪ್ರಸಾದ್ನನ್ನು ಪೊಲೀಸರು ಬಂಧಿಸಲಾಗಿದ್ದು, ಉಳಿದ ಆರೋಪಿಗಳಾದ ಕುಮಾರ್, ಶಿವಸ್ವಾಮಿ, ರಮೇಶ್ ಗೌಡ ಹಾಗೂ ಶ್ರೀಧರ್ ಎನ್ನುವವರನ್ನು ವಿಚಾರಣೆಗೆ ಒಳಪಡಿಸುವುದು ಬಾಕಿ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ಇದೇ 7ರಿಂದ 13ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ 11ನೇ ಎ.ಸಿ.ಎಂ.ಎಂ.ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನ ನೀಡಿರುವ ಬಿಟಿವಿ ಸುದ್ದಿವಾಹಿನಿಯ ಮಂಡಳಿ, "ಬಂಧಿತ ತೀರ್ಥಪ್ರಸಾದ್ ನಮ್ಮ ಸಿಬ್ಬಂದಿಯಲ್ಲ. ಆತನನ್ನು ಕೆಲವು ತಿಂಗಳುಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿದೆ" ಎಂದು ತಿಳಿಸಿದೆ.