ಬೆಂಗಳೂರು ಜ.08 (DaijiworldNews/AN): ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಭಾರತೀಯ ಚುನಾವಣಾ ಆಯೋಗ ಪರಿಷ್ಕರಿಸಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಗರಿಷ್ಠ 95 ಲಕ್ಷ ರೂ. ಗಳ ವರೆಗೆ ಖರ್ಚು ಮಾಡಲು ಅವಕಾಶವಿದ್ದು, ವಿಧಾನಸಭೆಯ ಸ್ಪರ್ಧಿಗಳಿಗೆ ಈ ಮಿತಿಯನ್ನು ರೂ.40 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶ ಹಾಗೂ ಕಡಿಮೆ ಮತದಾರರಿರುವ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಮತ್ತು ವಿಧಾನಸಭೆಯ ಮಿತಿಯನ್ನು ಕ್ರಮವಾಗಿ ರೂ. 70 ಲಕ್ಷ ಹಾಗೂ ರೂ. 28 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಹಣದುಬ್ಬರ ಸೂಚ್ಯಂಕದಲ್ಲಿನ ಹೆಚ್ಚಳ ಮತ್ತು ಮತದಾರರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಉಲ್ಲೇಖಿಸಿಯಾಗಿರುವುದರಿಂದ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಪರಿಷ್ಕರಿಸಲು ಪರಿಗಣಿಸುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ಯನ್ನು ಒತ್ತಾಯಿಸಿದ್ದವು.
ಈ ಆಯೋಗವು ಪರಿಶೀಲಿಸಿ 2014 ರಿಂದ 2021 ರವರೆಗೆ ಮತದಾರರಲ್ಲಿ ಶೇ. 12.23 ಮತ್ತು ಹಣದುಬ್ಬರ ಸೂಚ್ಯಂಕದಲ್ಲಿ ಶೇ.32.08ರಷ್ಟು ಹೆಚ್ಚಳವನ್ನು ಆಧರಿಸಿ, ವೆಚ್ಚದ ಮಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ.