ಚಿತ್ರದುರ್ಗ, ಜ 08 (DaijiworldNews/PY): ಪತ್ನಿಯನ್ನು ಹತ್ಯೆಗೈದು ಬಚ್ಚಲು ಮನೆಯಲ್ಲಿ ಹೂತಿಟ್ಟು, ಬಳಿಕ ಪೊಲೀಸ್ ಠಾಣೆಗೆ ಹೋಗಿ ಪತ್ನಿಯನ್ನು ಹುಡುಕಿ ಕೊಡಿ ಎಂದು ಪತಿ ಹೈಡ್ರಾಮ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಪತಿ ನಾರಪ್ಪ ಎಂಬಾತ ಪತ್ನಿ ಸುಮಾ (30) ಎಂಬವರನ್ನು ಹತ್ಯೆ ಮಾಡಿದ್ದು, ಬಳಿಕ ಮೃತದೇಹವನ್ನು ಹೂತಿಟ್ಟು ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಆಕೆಯನ್ನು ಹುಡುಕಲು ಆರಂಭಿಸಿದ್ದಾರೆ. ಆದರೆ, ಆಕೆ ಶವವಾಗಿ ಪತ್ತೆಯಾಗಿದ್ದು, ಆರೋಪಿ ಯಾರೆಂದು ತಿಳಿದ ಪೊಲೀಸರು ಒಂದು ವೇಳೆ ಶಾಕ್ ಆಗಿದ್ದಾರೆ.
ಡಿ.25ರಂದು ಅವರ 6ನೇ ವಾರ್ಷಿಕೋತ್ಸವಿತ್ತು. ಇದೇ ದಿನ ನಾರಪ್ಪ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಬಚ್ಚಲು ಮನೆಯಲ್ಲಿ ಹೂತಿಟ್ಟು, ಸಿಮೆಂಟ್ನಿಂದ ಪ್ಲಾಸ್ಟಿಂಗ್ ಮಾಡಿ ಪತ್ನಿ ಕಾಣೆಯಾಗಿದ್ದಾಳೆ ಎಂದು ನಾಟಕವಾಡಿದ್ದಾಳೆ.