ಬೆಂಗಳೂರು, ಜ 07 (DaijiworldNews/PY): "ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಮಾಡುವ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಪಾದಯಾತ್ರೆ ಮಾಡಲಿ, ಬೇಕಿದ್ದರೆ ಮ್ಯಾರಥಾನ್ ಬೇಕಾದರೂ ಮಾಡಲಿ" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾದಯಾತ್ರೆಯನ್ನು ಮೂರು ತಿಂಗಳು ಮುಂದೂಡಿ ಮಾರ್ಚ್-ಎಪ್ರಿಲ್ನಲ್ಲಿ ಮಾಡಲಿ" ಎಂದಿದ್ದಾರೆ.
"ಈಗ ಕೊರೊನಾ ಉಲ್ಬಣವಾಗುತ್ತಿದೆ. ಜನಹಿತ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡಲಿ"ಎಂದು ಹೇಳಿದ್ದಾರೆ.