ನವದೆಹಲಿ, ಜ 07 (DaijiworldNews/PY): ಕೊರೊನಾ ವೈರಸ್ ಹೊಸ ರೂಪಾಂತರದ ಕಾರಣ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತಕ್ಕೆ ಬರುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
"ಪ್ರಯಾಣಿಕರು ಆಗಮಿಸಿದ ಎಂಟನೇ ದಿನ ತಮ್ಮನ್ನು ತಾವು ಕೊರೊನಾ ಪರೀಕ್ಷೆಗೆ ಒಡ್ಡಿಕೊಳ್ಳುವುದು ಕಡ್ಡಾಯ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
"7 ದಿನಗಳ ಕಾಲ ಎಲ್ಲ ಪ್ರಯಾಣಿಕರು ಹೋಂ ಕ್ವಾರಂಟೈನ್ಗೆ ಒಳಗಾಗುತ್ತಾರೆ. ಇನ್ನು ಭಾರತಕ್ಕೆ ಬಂದ ಎಂಟನೇ ದಿನದಂದು ಆರ್ಟಿಪಿಸಿಆರ್ ಪರೀಕ್ಷೆಯನ್ನು ಕೈಗೊಳ್ಳಲಿದ್ಧಾರೆ" ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
"ಏರ್ ಸುವಿಧಾ ಪೋರ್ಟಲ್ನಲ್ಲಿ 8ನೇ ದಿನ ಮಾಡಿದ ಪುನರಾವರ್ತಿತ ಆರ್ಟಿಪಿಸಿಆರ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಯಾಣಿಕರು ಅಪ್ಲೋಡ್ ಮಾಡಬೇಕಾಗುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದರೆ, ಅವರು ಮುಂದಿನ 7 ದಿನಗಳವರೆಗೆ ಇನ್ನಷ್ಟು ಸ್ವಯಂ ಮೇಲ್ವಿಚಾರಣೆ ಮಾಡುತ್ತಾರೆ" ಎಂದು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.