ನವದೆಹಲಿ, ಜ 07 (DaijiworldNews/AN): ಖ್ಯಾತ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಅವರು ವಿವಾದಕ್ಕೆ ಸಿಲುಕಿದ್ದಾರೆ. ಕ್ಷೌರ ಮಾಡುವಾಗ ಮಹಿಳೆಯ ತಲೆ ಕೂದಲಿನ ಮೇಲೆ ಉಗುಳಿದ ವಿಲಕ್ಷಣ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ತರಬೇತಿ ಸೆಮಿನಾರ್ವೊಂದರಲ್ಲಿ ಹಬೀಬ್ ಮಹಿಳೆಯ ತಲೆ ಕೂದಲು ಒಣಗಿದೆ ಎಂದು ಹೇಳುತ್ತಾ ಆಕೆಯ ತಲೆಯ ಮೇಲೆ ಎಲ್ಲರ ಮುಂದೆ ಉಗುಳಿದ್ದಾರೆ.
ವಿಡಿಯೋದಲ್ಲಿ, ಮಹಿಳೆಯೊಬ್ಬರು ವೇದಿಕೆಯ ಮೇಲೆ ಸಲೂನ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ತರಬೇತಿ ಸೆಮಿನಾರ್ನಲ್ಲಿ ಹಾಜರಿದ್ದ ಜನರಿಗೆ ಹೇರ್ ಕಟ್ಟಿಂಗ್ ಸಲಹೆಗಳನ್ನು ನೀಡಿದ್ದಾರೆ. ಕೂದಲು ಕೊಳಕಾಗಿದೆ. ಏಕೆಂದರೆ ಶಾಂಪೂ ಬಳಸಿಲ್ಲ. ನೀರಿನ ಕೊರತೆ ಇದ್ದಲ್ಲಿ ನೀವು ಈ ರೀತಿ ಮಾಡಬಹುದು ಎಂದು ಹಬೀಬ್ ಮಹಿಳೆಯ ತಲೆಯ ಮೇಲೆ ಉಗುಳಿದ್ದಾರೆ.
"ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಹಾಗೂ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದೆ" ಎಂದು ಎನ್ಸಿಡಬ್ಲ್ಯು ಪಿಟಿಐ ರಾಜ್ಯ ಪೊಲೀಸರಿಗೆ ಪತ್ರದ ಮೂಲಕ ತಿಳಿಸಿದೆ.
ಜಾವೇದ್ ಹಬೀಬ್ ವಿರುದ್ದ ಎಭಾರತೀಯ ದಂಡ ಸಂಹಿತೆಯ ಸೆಕ್ಷನ್ 355 ಮತ್ತು 504 ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಇದರ ಕುರಿತು ಸೂಕ್ತ ಕ್ರಮ ತೆಗೆದುಕೊಂಡ ಕ್ರಮದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ಆಯೋಗವು ತಿಳಿಸಿದೆ.