ಮುಂಬೈ, ಡಿ 07 (DaijiworldNews/MS): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿರುವ ಮಹಾರಾಷ್ಟ್ರದ ಬಿಜೆಪಿಯ ಸಾಮಾಜಿಕ ಮಾಧ್ಯಮ ಕೋಶದ ಸದಸ್ಯನನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ನ ಸೈಬರ್ ಸೆಲ್ ಗುರುವಾರ ವಿಚಾರಣೆಗೊಳಪಡಿಸಿದೆ.
ಜಿತೇನ್ ಗಜಾರಿಯಾ ಎಂಬ ವ್ಯಕ್ತಿ ಜನವರಿ 4 ರಂದು "ಮರಾಠಿ ರಾಬ್ರಿ ದೇವಿ" ಎಂಬ ಶೀರ್ಷಿಕೆಯೊಂದಿಗೆ ರಶ್ಮಿ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪತಿ ಲಾಲು ಪ್ರಸಾದ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಬಿಹಾರದಲ್ಲಿ ರಾಬ್ರಿ ದೇವಿ ಅವರು ಅಧಿಕಾರ ವಹಿಸಿಕೊಂಡಂತೆ ಅವರ ಪತ್ನಿ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ ಎಂಬ ವ್ಯಂಗಾರ್ಥದಲ್ಲಿಈ ಪೋಸ್ಟ್ ಮಾಡಲಾಗಿತ್ತು ರಶ್ಮಿ ಅವರಲ್ಲದೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧವೂ ಟ್ವೀಟ್ ಮಾಡಿದ್ದರು. ಇದು ಮಹಾರಾಷ್ಟ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಸಿಎಂ ಪತ್ನಿ ರಶ್ಮಿ ಠಾಕ್ರೆ ಅವರನ್ನು ‘ಮರಾಠಿ ರಾಬ್ಡಿ ದೇವಿ’ ಎಂದು ಮೂದಲಿಸಿದ ಟ್ವಿಟರ್ ಪೋಸ್ಟ್ ಇದೀಗ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮತ್ತು ಬಿಜೆಪಿ ಪಕ್ಷದ ನಡುವೆ ನಡುವೆ ಕೆಸರೆರೆಚಾಟ ಆರಂಭವಾಗಿದೆ.
‘ಹೇಳಿಕೆ ದಾಖಲಿಸಲು ಗಜಾರಿಯಾ ಅವರನ್ನು ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಸೈಬರ್ ಸೆಲ್ಗೆ ಕರೆಯಲಾಗಿತ್ತು. ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ,’ ಎಂದು ವಕೀಲ ವಿವೇಕಾನಂದ ಗುಪ್ತಾ ಹೇಳಿದ್ದಾರೆ.