ಅಮೃತ್ಸರ್, ಜ 06 (DaijiworldNews/HR): ಇಟಲಿ-ಅಮೃತ್ಸರ್ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಿದ 179 ಮಂದಿ ಪ್ರಯಾಣಿಕರ ಪೈಕಿ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಅಮೃತ್ಸರ್ ವಿಮಾನ ನಿಲ್ದಾಣ ನಿರ್ದೇಶಕ ವಿ.ಕೆ.ಸೇಠ್ ತಿಳಿಸಿದ್ದಾರೆ.
ಇಟಲಿಯಿಂದ ಪಂಜಾಬ್ನ ಅಮೃತ್ಸರ್ ಏರ್ಪೋರ್ಟ್ಗೆ ಏರ್ ಇಂಡಿಯಾ ವಿಮಾನ ತಲುಪಿ ಇಲ್ಲಿ ತಪಾಸಣೆ ಮಾಡಿದಾಗ 125 ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಏರ್ಪೋರ್ಟ್ನಲ್ಲಿ ಬೇರೆ ದೇಶಗಳಿಂದ ಬಂದ ಪ್ರಯಾಣಿಕರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದ್ದು, ಇಟಲಿಯಿಂದ ಬಂದ ಪ್ರಯಾಣಿಕರನ್ನೂ ಟೆಸ್ಟ್ಗೆ ಒಳಪಡಿಸಲಾಗಿತ್ತು. 179 ಮಂದಿಗೆಯಲ್ಲಿ 125 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಇಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ತಪಾಸಣೆಯ ವೇಗ ಇನ್ನಷ್ಟು ಹೆಚ್ಚುಗೊಳಿಸುವಂತೆ ಸೂಚಿಸಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 90 ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದೆ. ಇದು ನಿನ್ನೆಗಿಂತ ಶೇ.56ರಷ್ಟು ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದಲೂ ಗಣನೀಯವಾಗಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಒಮಿಕ್ರಾನ್ ಕೂಡ ಹರಡುತ್ತಿದೆ.