ಮಧ್ಯಪ್ರದೇಶ, ಜ 06 (DaijiworldNews/AN): ಕೊರೊನಾ ಪರೀಕ್ಷೆ ಮಾಡಲು ಹೋದ ತಹಸೀಲ್ದಾರ್ ಓರ್ವರಿಗೆ ಅಲ್ಲಿನ ಮಹಿಳಾ ವೈದ್ಯರು ಮಾಸ್ಕ್ ಧರಿಸುವಂತೆ ಹೇಳಿದಾಗ ಅವರೊಡನೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ಘಟನೆ ಗ್ವಾಲಿಯರ್ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಈ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಹಸೀಲ್ದಾರ್ ಅವರ ವರ್ತನೆಯ ವಿರುದ್ಧ ಸ್ಥಳದಲ್ಲಿದ್ದ ಎಲ್ಲಾ ವೈದ್ಯರು ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ನಾನು ತಹಸೀಲ್ದಾರ್ ನನ್ನನ್ನು ತಡೆಯಲು ನೀವು ಯಾರೂ ಅಲ್ಲ ಎಂದು ಮಹಿಳಾ ವೈದ್ಯರಿಗೆ ಹೇಳಿ ಅನುಚಿತವಾಗಿ ವರ್ತಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ಕೊರೊನಾ ತನಿಖಾ ತಂಡ ಮತ್ತು ತಹಸೀಲ್ದಾರ್ ನಡುವೆ ವಿವಾದ ಉಂಟಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ವಿರುದ್ಧ ಜಿಆರ್ಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.