ಬೆಂಗಳೂರು, ಜ 06 (DaijiworldNews/HR): ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯದ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ ಆಸೆಯಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಚೆನ್ನಾಗಿರಲಿ ಎಂಬುದು ನಮ್ಮ ಭಾವನೆಯಾಗಿದೆ. ಈಗ ಮೇಕೆದಾಟು ಪಾದಯಾತ್ರೆ, ಧರಣಿ ಮಾಡಬೇಡಿ ಎಂದಿದ್ದೇವೆ. ಮಾಡಿಯೇ ಮಾಡುತ್ತೇವೆ ಅಂದರೆ ಅವರಿಗೆ ಸೇರಿದ್ದು" ಎಂದರು.
ಇನ್ನು ರಾಜ್ಯದಲ್ಲಿ ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ. ಜಿಲ್ಲೆಗಳಿಗೆ ಇನ್ನೂ ಯಾವುದೇ ರೀತಿಯಾಗಿ ಆದೇಶ ಬಂದಿಲ್ಲ. ನನಗೆ ಬೇಜಾರಿಲ್ಲ, ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ" ಎಂದಿದ್ದಾರೆ.