ಮಲಪ್ಪುರಮ್, ಜ 06 (DaijiworldNews/AN): ಹಳಿ ದಾಟುತ್ತಿದ್ದಾಗ ರೈಲಿನಡಿ ಸಿಲುಕಿ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಕೇರಳದ ತಾನೂರು ರೈಲ್ವೇ ಸ್ಟೇಷನ್ ಬಳಿ ನಡೆದಿದೆ.
ಮೃತರನ್ನು ತಲಕ್ಕಡತೂರಿನ 10 ವರ್ಷದ ಅಜ್ವಾ ಮರ್ವಾ ಹಾಗೂ 49 ವರ್ಷದ ಅಸೀಸ್ ಎಂದು ಗುರುತಿಸಲಾಗಿದೆ.
ತನೂರು-ತಿರೂರು ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ತಂದೆ ಮತ್ತು ಮಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು-ಚೆನ್ನೈ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ಅಸೀಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮೃತದೇಹಗಳನ್ನು ತಿರೂರ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.