ನವದೆಹಲಿ, ಜ 06 (DaijiworldNews/HR): ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳಿಗೆ ಪ್ಯಾರೆಸಿಟಮಾಲ್ ಅಥವಾ ನೋವು ನಿವಾರಕಗಳ ಅಗತ್ಯವಿಲ್ಲ ಎಂದು ಲಸಿಕೆ ತಯಾರಕ ಭಾರತ್ ಬಯೋಟೆಕ್ ಹೇಳಿದೆ.
ಈ ಕುರಿರು ಮಾಹಿತಿ ನೀಡಿರುವ ಭಾರತ್ ಬಯೋಟೆಕ್ ಕಂಪೆನಿ, "ಕೆಲವು ರೋಗನಿರೋಧಕ ಕೇಂದ್ರಗಳು ಮಕ್ಕಳಿಗೆ ಕೋವಾಕ್ಸಿನ್ ಜೊತೆಗೆ 3 ಪ್ಯಾರಸಿಟಮಾಲ 500 ಮಿಗ್ರಾಂ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಿವೆ ಎಂದು ಹೇಳಿರುವುದನ್ನು ಗಮನಿಸಿದ್ದೇವೆ. ಆದರೆ ಕೋವಾಕ್ಸಿನ್ ಲಸಿಕೆ ಬಳಿಕ ಯಾವುದೇ ಪ್ಯಾರೆಸಿಟಮಾಲ್ ಅಥವಾ ನೋವು ನಿವಾರಕಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದೆ.
ಇನ್ನು ಭಾರತ್ ಬಯೋಟೆಕ್ ಸಂಸ್ಥೆಯು ತನ್ನ ಕ್ಲಿನಿಕಲ್ ಪ್ರಯೋಗಗಳ ಮೂಲಕ 30,000 ವ್ಯಕ್ತಿಗಳನ್ನು ಪರೀಕ್ಷೆ ಮಾಡಿದ್ದು, ಸುಮಾರು 10-20% ವ್ಯಕ್ತಿಗಳು ಅಡ್ಡಪರಿಣಾಮಗಳನ್ನು ವರದಿ ಮಾಡಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿರುತ್ತವೆ, 1-2 ದಿನಗಳಲ್ಲಿ ಸರಿಯಾಗುತ್ತವೆ ಮತ್ತು ಔಷಧಿಗಳ ಅಗತ್ಯವಿಲ್ಲ. ನೀವು ವೈದ್ಯರನ್ನು ಸಂಪರ್ಕಿಸಿದ ನಂತರ ಮಾತ್ರ ಔಷಧಿಗಳನ್ನು ಶಿಫಾರಸು ಮಾಡಲಾಗುತ್ತದೆ ಎಂದಿದೆ.
ಕೆಲವು ಇತರ ಕೊರೊನಾ ಲಸಿಕೆ ಪಡೆದರೆ ಪ್ಯಾರೆಸಿಟಮಾಲ್ ಅನ್ನು ಶಿಫಾರಸು ಮಾಡಲಾಗಿದೆ ಆದರೆ ಕೋವಾಕ್ಸಿನ್ಗೆ ಶಿಫಾರಸು ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.