ನವದೆಹಲಿ, ಜ 05 (DaijiworldNews/PY): 15-18 ವಯೋಮಾನದ ಸುಮಾರು 1 ಕೋಟಿ ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "15-18 ವಯೋಮಾನದ ನಡುವಿನ ಸುಮಾರು 1 ಕೋಟಿ ಮಕ್ಕಳು ತಮ್ಮ ಮೊದಲ ಡೋಸ್ ಪಡೆದುಕೊಂಡಿದ್ಧಾರೆ. ಎಲ್ಲಾ ಅರ್ಹರು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ" ಎಂದಿದ್ಧಾರೆ.
ಕೊರೊನಾ ಲಸಿಕೆ ಪಡೆದ 15-18 ವಯೋಮಾನದ ಎಲ್ಲರಿಗೂ ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, "ಲಸಿಕೆ ಹಾಕಿಸಿಕೊಂಡ 15-18 ವಯೋಮಾನದ ಎಲ್ಲರಿಗೂ ಹಾಗೂ ಅವರ ಪೋಷಕರಿಗೂ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ದ ಹೋರಾಟದಲ್ಲಿ ಯುವಕರನ್ನು ರಕ್ಷಿಸುವಲ್ಲಿ ದೇಶವು ಪ್ರಮುಖ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಯುವಕರು ಲಸಿಕೆ ಹಾಕಿಸಿಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ಜನವರಿ 3 ರಿಂದ 15-18 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಪ್ರಾರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿ.25ರಂದು ಘೋಷಿಸಿದ್ದರು.