ನವದೆಹಲಿ, ಜ 05 (DaijiworldNews/PY): ಆಶಾ ರಾಣಿ ಎಂಬ ಭಾರತದ ಮಹಿಳೆಯೋರ್ವರು ತನ್ನ ಕೂದಲಿನಿಂದ ಡಬಲ್ ಡೆಕ್ಕರ್ ಬಸ್ ಅನ್ನು ಎಳೆಯುವ ಮೂಲಕ ವಿಶ್ವ ದಾಖಲೆ ರಚಿಸಿದ್ದಾರೆ.
ಗಿನ್ನೆಸ್ ರೆಕಾರ್ಡ್ಸ್ ಹಂಚಿಕೊಂಡ ಬ್ಲಾಕ್ನ ಪ್ರಕಾರ, ಆಶಾ ರಾಣಿ ಅವರು 2016ರಲ್ಲಿ ಈ ಸಾಧನೆಯನ್ನು ಮಾಡಿದ್ದರು. ಮಿಲನ್ನಲ್ಲಿರುವ ಲೋ ಶೋ ಡೀ ರೆಕಾರ್ಡ್ ಸೆಟ್ನಲ್ಲಿ ಲಂಡನ್ ಡಬಲ್ ಡೆಕ್ಕರ್ ಬಸ್ ಅನ್ನು ಎಳೆದು ಅವರು ಐರನ್ ಕ್ವೀನ್ ಎನ್ನುವ ಪ್ರಶಂಸೆಗೊಳಪಟ್ಟಿದ್ಧಾರೆ. ಆಶಾ ಈಗ ತನ್ನ ವಿಶಿಷ್ಟ ತೂಕ ಎತ್ತುವ ಕೌಶಲ್ಯಕ್ಕಾಗಿ ಏಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.
ಈ ವಿಡಿಯೋ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಅಧಿಕೃತ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ ಪೋಸ್ಟ್ ಆಗಿದ್ದು, ಈ ವಿಡಿಯೋ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಇನ್ನು ವಿಡಿಯೋವನ್ನು 37 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ವಿಡಿಯೋ ಸಕತ್ ವೈರಲ್ ಆಗಿದೆ.