ದೆಹಲಿ, ಜ 05 (DaijiworldNews/HR): ಹಳ್ಳಿ ಮತ್ತು ನಗರಗಳಲ್ಲಿನ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಡಿಜಿಟಲ್ ಪಾವತಿಯನ್ನು ಅನುಮೋದಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಫ್ಲೈನ್ ಡಿಜಿಟಲ್ ಪಾವತಿಗಳ ರೂಪುರೇಷೆಯನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.
ಆಫ್ಲೈನ್ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅಥವಾ ಮೊಬೈಲ್ ನೆಟ್ವರ್ಕ್ ಅಗತ್ಯವಿಲ್ಲ. ಈ ಆಫ್ಲೈನ್ನಲ್ಲಿ ಕಾರ್ಡ್, ಮೊಬೈಲ್ ಸೇರಿದಂತೆ ಯಾವುದೇ ವಿಧಾನದಿಂದ ನೇರವಾಗಿ ಪಾವತಿ ಮಾಡಬಹುದು.
ಇನ್ನು ಆಫ್ಲೈನ್ ಪಾವತಿ ಅಡಿಯಲ್ಲಿ 200 ರೂ.ವರೆಗಿನ ವಹಿವಾಟುಗಳನ್ನು ಅನುಮತಿಸಲಾಗಿದ್ದು, ಇದರಲ್ಲಿ, ಗರಿಷ್ಠ 10 ವಹಿವಾಟುಗಳು ಅಂದರೆ ಒಟ್ಟು 2,000 ರೂ.ವರೆಗೆ ಆಫ್ಲೈನ್ನಲ್ಲಿ ಅನುಮತಿಸಲಾಗುತ್ತದೆ ಎನ್ನಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 2020 ರಿಂದ ಜೂನ್ 2021 ರ ಅವಧಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆಫ್ಲೈನ್ ಪಾವತಿಯನ್ನು ಪ್ರಾರಂಭಿಸಲಾಗಿದ್ದು, ಸ್ವೀಕರಿಸಿದ ಪ್ರತಿಕ್ರಿಯೆಯನ್ನು ಆಧರಿಸಿ ಈ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ.