ನವದೆಹಲಿ, ಡಿ 05(DaijiworldNews/MS): ಭಾರತದಲ್ಲಿ ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು, ಕೇವಲ ಕಳೆದ 24 ಗಂಟೆಗಳಲ್ಲಿ ಪ್ರಕರಣ ಸಂಖ್ಯೆಯಲ್ಲಿ ಶೇ.55% ಜಿಗಿತ ಕಂಡಿದೆ. ಅಲ್ಲದೇ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಈ ವರೆಗೂ ದೇಶಾದ್ಯಂತ 2,135 ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಆರೋಗ್ಯ ಸಚಿವಾಲಯ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ಹೊಸದಾಗಿ ದೃಢಪಟ್ಟಿದ್ದು, ಒಟ್ಟಾರೆ ಪಾಸಿಟಿವ್ ದರ ಶೇ.4.18%ಕ್ಕೆ ಏರಿಕೆಯಾಗಿದೆ. 15,389 ಮಂದಿ ಸೋಂಕಿತರು ಗುಣಮುಖರಾಗಿದ್ದು, ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.
ಭಾರತದಲ್ಲಿ 2,14,004 ಸಕ್ರೀಯ ಕೇಸ್'ಗಳಿದ್ದು, ಇಲ್ಲಿವರೆಗೆ ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 147.72 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಇನ್ನು ಈವರೆಗೆ ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.