ಬೆಂಗಳೂರು, ಜ. 4 (DaijiworldNews/SM): ರಾಜ್ಯದಲ್ಲಿ ಓಮೈಕ್ರಾನ್ ಹಿನ್ನೆಲೆಯಲ್ಲಿ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಾಂತ್ರಿಕ ತಜ್ಞರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಸಚಿವ ಆರ್ ಅಶೋಕ್ ಹಾಗೂ ಸಚಿವ ಡಾ. ಸುಧಾಕರ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ?
ರಾಜ್ಯದೆಲ್ಲೆಡೆ ವಾರಾಂತ್ಯ ಕರ್ಫ್ಯೂ ಜಾರಿ
ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ
ಸೋಮವಾರ ಮುಂಜಾನೆಯ ತನಕ ವೀಕೆಂಡ್ ಕರ್ಫ್ಯೂ
ನೈಟ್ ಕರ್ಫ್ಯೂ 2 ವಾರಗಳ ಕಾಲ ಮುಂದುವರಿಕೆ
ಮದುವೆ ಸಮಾರಂಭಗಳಲ್ಲಿ ಹೊರಾಂಗಣ-200 ಜನ
ಒಳಾಂಗಣದಲ್ಲಿ-100 ಜನ ಭಾಗವಹಿಸಲು ಅನುಮತಿ
ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ
ಎಲ್ಲಾ ಸಭೆ ಸಮಾರಂಭಗಳಿಗೆ ಬ್ರೇಕ್
ಮುಂದಿನ ಎರಡುವಾರಗಳ ಕಾಲ ಮಾರ್ಗಸೂಚಿ ಜಾರಿ
ರಾತ್ರಿ 10ರಿಂದ ಮುಂಜಾನೆ 5ರ ತನಕ ನೈಟ್ ಕರ್ಫ್ಯೂ
ಸೋಮವಾರದಿಂದ ಶುಕ್ರವಾರ ತನಕ ಕಚೇರಿಗಳು ತೆರೆದಿರುತ್ತವೆ
ಸಿನಿಮಾ ಮಂದಿರಗಳು ಶೇ. 50ರಷ್ಟು ತೆರೆಯಲು ಅವಕಾಶ
ಧಾರ್ಮಿಕ ಕೇಂದ್ರಗಳಿಗೆ 50 ಜನರ ಪ್ರವೇಶಕ್ಕೆ ಅವಕಾಶ
2 ಡೋಸ್ ಲಸಿಕೆ ಪಡೆದಿದ್ದಲ್ಲಿ ಮಾತ್ರ ಅವಕಾಶ
ಮಾಲ್, ಶಾಪಿಂಗ್ ಮಾಲ್ ಗಳು ವಾರದ ಮಧ್ಯೆ ತೆರೆಯಲು ಅವಕಾಶ
ಸ್ವಿಮ್ಮಿಂಗ್ ಫೂಲ್, ಜಿಮ್ ಗಳಲ್ಲಿ ಶೇ. 50ರಷ್ಟು ಜನ ಭಾಗವಹಿಸಲು ಅನುಮತಿ