ಲಕ್ನೋ, ಜ 04 (DaijiworldaNews/AN): ತನ್ನ ಪತ್ನಿಯನ್ನು ಕಟ್ಟಡದ ಎಂಟನೇ ಮಹಡಿಯ ಬಾಲ್ಕನಿಯಿಂದ ಎಸೆದಿರುವ ಘಟನೆ ಸೋಮವಾರ ಗೋಸೈಗಂಜ್ನಲ್ಲಿ ನಡೆದಿದೆ. ಆರೋಪಿಯು ಸಂಜೀವ್ ಕುಮಾರ್ ಎಂದು ತಿಳಿದು ಬಂದಿದ್ದು, ಪತ್ನಿ ನೀತು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಜೀವ್ ಖಾಸಗಿ ಸಂಸ್ಥೆಯೊಂದರಲ್ಲಿ ಫೈನಾನ್ಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಗೃಹಿಣಿಯಾಗಿದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದು, 2011 ರಲ್ಲಿ ವಿವಾಹವಾದ ಇವರುಗಳ ನಡುವೆ ನಿತ್ಯ ಜಗಳ ಉಂಟಾಗುತ್ತಿತ್ತು.
"ಸಂಜೀವ್ ಕಳೆದ 3 ವರ್ಷಗಳಿಂದ ವಿವಾಹೇತರ ಸಂಬಂಧವನ್ನು ಹೊಂದಿದ್ದು, ಇದನ್ನು ಪತ್ನಿ ವಿರೋಧಿಸುತ್ತಿದ್ದಳು. ಆದರೆ ಆತ ಆಕೆ ತನ್ನ ಸಹೋದರಿ ಎಂದು ಹೇಳಿ ಹಲವು ಬಾರಿ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು. ಇದನ್ನು ತನ್ನ ಸಹೋದರಿ ನೀತು ನನ್ನ ಬಳಿ ಹೇಳಿಕೊಂಡಿದ್ದಾಳೆ". ಎಂದು ಕಿರಣ್ ರಾಜ್ ಪೋಲೀಸರಿಗೆ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಗೋಸಾಯಿಗಂಜ್ ಶೈಲೇಂದ್ರ ಗಿರಿ, ನಾವು ಸಂತ್ರಸ್ತೆಯ ಸಹೋದರನಿಂದ ದೂರು ಸ್ವೀಕರಿಸಿ, ಸಂಜೀವ್ ಅವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.