ನವದೆಹಲಿ, ಜ 04 (DaijiworldaNews/HR): ಭಾರತದಲ್ಲಿ ಡಿಸೆಂಬರ್ 3ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳ ಕೊರೊನಾ ಲಸಿಕಾಕರಣ ಅಭಿಯಾನ ಆರಂಭವಾಗಿದ್ದು, ಮೊದಲ ದಿನ ಸುಮಾರು 40 ಲಕ್ಷ ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲಸಿಕಾ ಅಭಿಯಾನದ ಕುರಿತು ಟ್ವೀಟ್ ಮಾಡಿದ್ದು, "ವೆಲ್ ಡನ್ ಯಂಗ್ ಇಂಡಿಯಾ ಸುಮಾರು 40 ಲಕ್ಷ 15 ರಿಂದ 18 ವಯೋಮಿತಿಯ ಮಕ್ಕಳು ಮೊದಲ ದಿನದ ಲಸಿಕಾ ಅಭಿಯಾನದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಮಕ್ಕಳ ಲಸಿಕಾ ಅಭಿಯಾನಕ್ಕೆ ಕೋವಿನ್ ಪೋರ್ಟಲ್ನಲ್ಲಿ ಸೋಮವಾರ ಮಧ್ಯಾಹ್ನದ ಹೊತ್ತಿದೆ 39.88 ಲಕ್ಷ ನೋಂದಣಿಗಳು ಆಗಿದ್ದವು.
ಇನ್ನು ಲಸಿಕೆ ಅಭಿಯಾನದ ಮೊದಲ ದಿನ ಕರ್ನಾಟಕದಲ್ಲಿ 3.80 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಣದೀಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.