ನವದೆಹಲಿ, ಜ 04 (DaijiworldaNews/HR): ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದ ಸದಸ್ಯರು ಮತ್ತು ಅವರ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಪ್ರಿಯಾಂಕಾ ಅವರು ಕೂಡ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಅವರು, ನನ್ನ ಕುಟುಂಬದ ಸದಸ್ಯ ಮತ್ತು ನನ್ನ ಸಿಬ್ಬಂದಿಯೊಬ್ಬರಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಾನು ಪರೀಕ್ಷೆ ಮಾಡಿದ್ದು, ನನಗೆ ನೆಗೆಟಿವ್ ದೃಢಪಟ್ಟಿದೆ. ಆದರೆ ವೈದ್ಯರು ನಾನು ಪ್ರತ್ಯೇಕವಾಗಿರಲು ಮತ್ತು ಕೆಲವು ದಿನಗಳ ನಂತರ ಮತ್ತೆ ಪರೀಕ್ಷಿಸಲು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೊರೊನಾ ಪ್ರಕರಣಗಳು ಮತ್ತು 123 ಸಾವುಗಳು ವರದಿಯಾಗಿವೆ.