ಲಕ್ನೋ, ಜ 04 (DaijiworldNews/MS): ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ "ಕೇವಲ ಸಾಮಾನ್ಯ ವೈರಲ್ ಜ್ವರ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದಿದ್ದಾರೆ.
ಓಮಿಕ್ರಾನ್ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು , ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ತೀವ್ರವಾಗುತ್ತಿದೆಯಾದರೂ, ಈ ಓಮಿಕ್ರಾನ್ ರೂಪಾಂತರಿ ದುರ್ಬಲ ರೂಪಾಂತರವಾಗಿದೆ. ಜನರು ಚಿಂತಿಸಬೇಕಾಗಿಲ್ಲ , ಕೋವಿಡ್ ಅಂತಿಮ ಹಂತದಲ್ಲಿದ್ದು ಸಾಂಕ್ರಮಿಕ ಕಾಲಘಟ್ಟದ ಹೊರಬರುವ ಹಾದಿಯಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಓಮಿಕ್ರಾನ್' ವೇಗವಾಗಿ ಹರಡುತ್ತಿದ್ದು, ಕೋವಿಡ್ ಎರಡನೇ ಅಲೆಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರಿ ಸ್ವಲ್ಪ ದುರ್ಬಲವಾಗಿದೆ ಎಂಬುದು ನಿಜ. ಇದು ಸಾಮಾನ್ಯ ವೈರಲ್ ಜ್ವರ. ಯಾವುದೇ ಇತರ ರೋಗದಂತೆ, ಇದಕ್ಕೆ ಮುನ್ನೆಚ್ಚರಿಕೆ ಹಾಗೂ ಜಾಗರೂಕತೆಯ ಅಗತ್ಯವಿದೆ . ಓಮಿಕ್ರಾನ್ ಡೆಲ್ಟಾದಂತೆ ತೀವ್ರವಾಗಿರುವುದಿಲ್ಲ, ಇದು ಎರಡನೇ ಅಲೆಯ ಸಮಯದಲ್ಲಿ ಕಂಡ ಬಂದ ರೀತಿಯಲ್ಲಿ ಸೋಂಕು ತೀವ್ರವಾಗಿ ಬಾಧಿಸುವುದಿಲ್ಲ. ೨ನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ಚೇತರಿಕೆಯ ದರ ನಿಧಾನಗತಿಯಲ್ಲಿ ಸಾಗಿತ್ತು . ಆದರೆ ಓಮಿಕ್ರಾನ್ನಲ್ಲಿ ಈ ಗುಣಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ವಿವಿಧ ಪಕ್ಷಗಳ ಬೃಹತ್ ರ್ಯಾಲಿಗಳನ್ನು ಆಯೋಜಿಸಲಾಗುತ್ತಿರುವ ಚುನಾವಣೆಗೆ ಎದುರಿಸುತ್ತಿರುವ ಉತ್ತರ ಪ್ರದೇಸದಲ್ಲಿ ರಾಜ್ಯವು ಕಳೆದ ವಾರದಿಂದ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡುಬಂದಿದೆ.