ಲಕ್ನೊ, ಜ. ೦3 (DaijiworldNews/SM): ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ ಎಂದು ಯು.ಪಿ. ಸಿಎಂ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.
ಅಮೇಥಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ದೇವಸ್ಥಾನಗಳಲ್ಲಿ ಕುಳಿತುಕೊಳ್ಳುವ ರೀತಿ ರಾಹುಲ್ ಗೆ ಗೊತ್ತಿಲ್ಲ. ದೇವಸ್ಥಾನದ ಅರ್ಚಕರು ಈ ಬಗ್ಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಹಾಗಿರುವಾಗ ಹಿಂದುತ್ವದ ಬಗ್ಗೆ ರಾಹುಲ್ ಎಷ್ಟು ತಿಳಿದಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.