ಬೆಂಗಳೂರು, ಜ 03 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಜಿಮ್ನಲ್ಲಿ ಕಸರತ್ತು ಮಾಡುವ ವಿಡಿಯೋವೊಂದು ಹರಿದಾಡುತ್ತಿದೆ.
ಪ್ರಧಾನಿ ಮೋದಿ ಅವರು ಜಿಮ್ ಮಾಡಿರುವ ವಿಡಿಯೋವನ್ನು ಐವೈಸಿ ಕರ್ನಾಟಕ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದು, "ಎಲ್ಲಾ ಬಿಟ್ಟ ಭಂಗಿ ನೆಟ್ಟ ಅನ್ನೋ ಗಾದೆಯಂತಿದೆ" ಎಂಬ ಕ್ಯಾಪ್ಷನ್ ನೀಡಿದೆ.
"ಗಲ್ವಾನ್ ಕಣಿವೆಯಲ್ಲಿ ನಮ್ಮ 20 ಸೈನಿಕರನ್ನು ಕಳೆದುಕೊಂಡ ದುಃಖ ಇನ್ನೂ ಮಾಸಿಲ್ಲ. ಆಗಲೇ ಚೀನಾದ ಸೈನಿಕರು ಅದೇ ಸ್ಥಳದಲ್ಲಿ ನಿಂತುಕೊಂಡು ತಮ್ಮ ದೇಶಕ್ಕೆ ಹೊಸ ವರ್ಷದ ಶುಭಾಶಯ ಕೋರುತ್ತಿದ್ದರೆ, ಈ ಕಡೆ ಪ್ರಧಾನಿ ಮದಿ ಅವರು ಜಿಮ್ನಲ್ಲಿ ಪೋಸ್ ನೀಡುತ್ತಾ ಆರಾಮವಾಗಿದ್ಧಾರೆ" ಎಂದು ವ್ಯಂಗ್ಯವಾಡಿದೆ.