ಮುಂಬೈ, ಜ 03 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರಿಗಾಗಿ 12 ಕೋಟಿ ರೂ.ಗಳ ಬೆಲೆಯ ಕಾರೊಂದನ್ನು ಖರೀದಿ ಮಾಡಲಾಗಿದ್ದು, ಇದರ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಶಿವಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ಬರೆಯುವ 'ರೋಖ್ಠೋಕ್' ಅಂಕಣದಲ್ಲಿ ಈ ಕುರಿತು ಹೇಳಿಕೊಂಡಿರುವ ಅವರು, "ಪ್ರಧಾನಿ ಮೋದಿ ಹೊಸ ಕಾರಿನ ಖರೀದಿಯಿಂದಾಗಿ ಈಗ ತಮ್ಮನ್ನು ತಾವು 'ಫಕೀರ' ಎಂದು ಕರೆದುಕೊಳ್ಳುವಂತಿಲ್ಲ" ಎಂದಿದ್ದಾರೆ.
"ಪ್ರಧಾನ ಮಂತ್ರಿ ಮೋದಿಯವರ 12 ಕೋಟಿ ರೂ. ಮೌಲ್ಯದ ಕಾರೊಂದರ ಬಗ್ಗೆ ಡಿಸೆಂಬರ್ 28ರಂದು ಮಾಧ್ಯಮಗಳು ವರದಿ ಮಾಡಿದ್ದು, ತಮ್ಮನ್ನು ತಾವು ಪ್ರಧಾನ ಸೇವಕ, ಫಕೀರ ಎಂದು ಕರೆದುಕೊಳ್ಳುವ ವ್ಯಕ್ತಿ ವಿದೇಶೀ ನಿರ್ಮಿತ ಕಾರೊಂದನ್ನು ಬಳಸುತ್ತಿದ್ದಾರೆ. ಪ್ರಧಾನ ಮಂತ್ರಿಯ ಭದ್ರತೆ ಹಾಗೂ ಆರಾಮ ಮುಖ್ಯವಾಗಿವೆ ಆದರೆ ಇಂದಿನಿಂದ ತಾವು ಫಕೀರ ಎಂದು ಅವರು ಮತ್ತೆ ಮತ್ತೆ ಹೇಳುವಂತಿಲ್ಲ ಎಂದು ಹೇಳಿದ್ದಾರೆ.