ಮೈಸೂರು, ಜ 03 (DaijiworldNews/PY): "ಬಿಜೆಪಿ, ಕೊರೊನಾ ವಿಚಾರವನ್ನು ಮುಂದಿಟ್ಟುಕೊಂಡು ಮೇಕೆದಾಟು ಪಾದಯಾತ್ರೆಯನ್ನು ತಡೆಯಲು ಹುನ್ನಾರ ನಡೆಸುತ್ತಿದೆ. ನಮ್ಮನ್ನು ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ ಪಾದಯಾತ್ರೆ ಮುಂದುವರಿಯಲಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
"ಲಾಕ್ಡೌನ್ ಸೃಷ್ಟಿಸಲು ಯತ್ನಿಸುತ್ತಿದ್ಧಾರೆ. ಲಾಕ್ಡೌನ್ ಮಾಡಲಿ ಅಥವಾ ಬೇರೆ ಏನೂ ಮಾಡಲಿ ಆದರೆ, ಪಾದಯಾತ್ರ ಮಾತ್ರ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕೊರೊನಾ ಇದ್ದರು ಸಿಎಂ ವಿವಾದಲ್ಲಿ ಪಾಲ್ಗೊಂಡು ಮಾರ್ಗಸೂಚಿಯನ್ನು ಉಲ್ಲಂಘಿಸಿಲ್ಲವೇ?. ಸಿಎಂ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗಿದೆ" ಎಂದು ಕೇಳಿದ್ದಾರೆ.
"ನಾವು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಪಾದಯಾತ್ರೆ ನಡೆಸುತ್ತೇವೆ. 1 ಲಕ್ಷ ಮಾಸ್ಕ್ ತರಿಸಲಿದ್ದೇವೆ. 10 ವೈದ್ಯಕೀಯ ತಂಡ ಇರಲಿದ್ದು, 100 ವೈದ್ಯರು ಭಾಗವಹಿಸುತ್ತಾರೆ" ಎಂದಿದ್ದಾರೆ.